Month: December 2019

ಮಕ್ಕಳ ಹಬ್ಬ

೨೫ ಡಿಸೇಂಬರ್ ೨೦೧೯ ರಂದು ಇಟಗಿ ಗ್ರಾಮದಲ್ಲಿ (ಖಾನಾಪುರ ತಾಲೂಕ್), ಕಲ್ಮೇಶ್ವರ ಗುಡಿಯಲ್ಲಿ “ಮಕ್ಕಳ ಹಬ್ಬ” ಜರುಗಿತು. ಸುಮಾರು ೪೦೦ ಮಕ್ಕಳು ೧೫ ಗ್ರಾಮಗಳಿಂದ ಬಂದು ಭಾಗವಹಿಸಿದರು. ನೃತ್ಯ, ನಾಟಕ ಹಾಗೂ ಹಾಡುಗಳನ್ನು  ಪ್ರದರ್ಶಿಸಿದರು. ಯಾವುದೇ ಕ್ಯಾಸೆಟ್ ಹಾಕದೇ ವಿವಿಧ ಪ್ರದರ್ಶನಗಳನ್ನು ತೋರಿಸಿದ್ದು ಈ ಮಕ್ಕಳ ಹಬ್ಬದ ಒಂದು ವಿಶೇಷತೆ. ಸ್ವಚ್ಛ ಭಾರತ, ಸಾವಿತ್ರಿ ಬಾಯಿ ಫುಲೆ ಹಾಗೂ ಲಿಂಗ ಸೂಕ್ಷ್ಮತೆಗಳ ಬಗ್ಗೆ ನಾಟಕಗಳಿದ್ದವು.